Wednesday, March 27, 2019

ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ


ಭಾರತ 'ಮಿಷನ್ ಶಕ್ತಿ' ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. Anti Satellite weapon A-SAT ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ. ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂಬ ಹೆಮ್ಮೆ ನಮ್ಮದು ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿಯವರು... ಮಿಷನ್ ಶಕ್ತಿ ಎರಡು ಕಾರಣಕ್ಕೆ ವಿಶೇಷವಾದ್ದು: ಮೊದಲನೆಯದು - ಇಂತಹ ವಿಶೇಷವಾದ ಮತ್ತು ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ. ಎರಡನೆಯದು - ಇದು ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಪ್ರಯತ್ನ. ಭಾರತವೀಗ ಮೊದಲಿಗಿಂತ ಶಕ್ತಿಯುತವಾಗಿದೆ. ಇದನ್ನು ಸಾಧಿಸಿದ ಡಿಆರ್‌ಡಿಒನ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆಗಳು. *Mission Shakti* *Super Power Bharath*

No comments:

Post a Comment