shriharinews
Thursday, September 26, 2019
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು.
Sunday, April 28, 2019
ಸ್ವಿಗ್ಗಿ ಡೆಲಿವರಿ ಬಾಯ್ ಮೆಕ್ಯಾನಿಕಲ್ ಇಂಜಿನಿಯರಿಂಗ್

Sunday, March 31, 2019
ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು
ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ. ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ. ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಮೋದಿಯಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹಕ್ಕೆ ಸಿಕ್ಕಿಕೊಂಡೆವು. ಮೋದಿಯಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ.?
ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ ಇನ್ನು ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ.
ಮತ್ತೆ ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು , ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲವೆಂದು ಅರಿತ.
ಜಗತ್ತಿನಲ್ಲೇ ಯಾವ ರಾಜಕಾರಣಿಗೂ ಈ ರೀತಿ ಶ್ರೀ ಸಾಮಾನ್ಯನು ಪ್ರಚಾರಕನಾಗಿಲ್ಲ.
ಭಾರತೀಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗಾಗುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಮೋದಿ ಜನರನ್ನ ತನ್ನತ್ತ ಸೆಳೆದ. ಭಾರತೀಯರು ಯಾವುದೇ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ.
ಮೋದಿ ಭಾರತವನ್ನು ಮಾತ್ರ ಬದಲಾಯಿಸುತ್ತಿಲ್ಲ ಭಾರತೀಯ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು.
ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಮೋದಿಯ ಮೇಲಿದೆ. ಮೋದಿಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.*
*ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ...*
Wednesday, March 27, 2019
ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ
ಭಾರತ 'ಮಿಷನ್ ಶಕ್ತಿ' ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. Anti Satellite weapon A-SAT ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ. ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂಬ ಹೆಮ್ಮೆ ನಮ್ಮದು ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿಯವರು...
ಮಿಷನ್ ಶಕ್ತಿ ಎರಡು ಕಾರಣಕ್ಕೆ ವಿಶೇಷವಾದ್ದು:
ಮೊದಲನೆಯದು - ಇಂತಹ ವಿಶೇಷವಾದ ಮತ್ತು ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ.
ಎರಡನೆಯದು - ಇದು ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಪ್ರಯತ್ನ. ಭಾರತವೀಗ ಮೊದಲಿಗಿಂತ ಶಕ್ತಿಯುತವಾಗಿದೆ.
ಇದನ್ನು ಸಾಧಿಸಿದ ಡಿಆರ್‌ಡಿಒನ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆಗಳು.
*Mission Shakti*
*Super Power Bharath*
Wednesday, March 6, 2019
ಮೆಗಾ ಸರ್ಜಿಕಲ್ ಸ್ಟ್ರೈಕ್ ಮೆಗಾ ಬೊಂಬಾಟ್ ಬ್ರೇಕಿಂಗ್ ನ್ಯೂಸ್* ..,
ಸಾಧನೆಯ ಸರದಾರನ ಮತ್ತೊಂದು ಸಾಧನೆಯ ಸ್ಟೋರಿ ..,
ಸ್ಫೂರ್ತಿಗೆ ಸಾಹಸಕ್ಕೆ ಸಾಧನೆಗೆ ಮತ್ತೊಂದು ಹೆಸರು ..,
ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಸಾಧನೆಗೆ ಪ್ರೇರೇಪಿಸುವ ಸಾಧನೆ .,
ಕರಾವಳಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ ..
ಇಡೀ ದೇಶವೇ ತಿರುಗಿ ನೋಡುವ ಸಾಧನೆಗೆ ಕಾರಣವಾಗಿದೆ ..,
ಮತ್ತೊಂದು ಅದ್ಬುತ ಅಚ್ಚರಿಗೆ ನಾಂದಿ ಹಾಡಿದೆ ..,
ಅದು ನಿರಂತರ ಹಠಕ್ಕೆ ಗೆಲ್ಲಲೇಬೇಕೆಂಬ ಕಿಚ್ಚಿಗೆ ಸಿಕ್ಕ ಪ್ರತಿಫಲ ..,
ಅವರ ಸಾಧನೆಗೆ ಮೊದಲಿಗೆ ಹೃದಯ ತುಂಬಿದ ಅಭಿನಂದನೆಗಳನ್ನ ಸಲ್ಲಿಸೋಣ ..,ಗೌರವಿಸೋಣ ..,❤❤💐💐💐💐💐
ವೃತ್ತಿಯಲ್ಲಿ ಅಡುಗೆ ಗುತ್ತಿಗೆದಾರ ಕ್ಯಾಟರ್ರ್ ..,
ಪ್ರವೃತ್ತಿಯಲ್ಲಿ ಸೋಲೊಪ್ಪದ ಸರದಾರ ..
ಕೆಲಸದಲ್ಲಿ ಬಿಡುವಿಲ್ಲದೆ ದುಡಿಯುವ ಕೂಲಿಕಾರ ..,
ಸಾದಿಸಲು ನಿಂತರೆ ದಣಿವರಿಯದ ಛಲಗಾರ ..,
ಹೀಗೆ ಎಲ್ಲ ಜಾಗದಲ್ಲೂ ಸಲ್ಲುವ ಎಲ್ಲ ಜಾಗಕ್ಕೂ ಸೈ ಎನಿಸುವ ಕಾಯಕವೇ ಕೈಲಾಶ ಎನ್ನುವ ಮನೋಭಾವದ ..,ಏನೆ ಮಾಡಿದರು ಅಲ್ಲೊಂದು ಹೆಜ್ಜೆ ಗುರುತನ್ನ ಮೂಡಿಸುವ ಅಲ್ಲೊಂದು ಹೊಸ ಅಲೆಯನ್ನೇ ಸೃಷ್ಟಿಸುವ ಜಾದೂಗಾರ ..,
ಪ್ರತಿ ತಿಂಗಳು ಹೊಸ ಮನ್ವಂತರಕ್ಕೆ ನಾಂದಿ ಹಾಡಿ ನೇರ ಮಾರುಕಟ್ಟೆಯ ವೇಗಕ್ಕೆ ತೈಲ ತುಂಬಿದ ಗಣಿಗಾರ ..,
ಈಗಲೂ ಕೇವಲ ಬಿಡುವಿನ ವೇಳೆಯಲ್ಲೇ ದಂಪತಿ ಸಮೇತ ಈ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಡೀ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಹೊಸತನದ ಹರಿಕಾರ ..,
ನಮ್ಮೆಲ್ಲರ ಪ್ರೀತಿಯ ಆತ್ಮೀಯ ಸಾಧಕ ದಂಪತಿಗಳ ಹೆಸರನ್ನು ಹೇಳಬೇಕಿಲ್ಲ .., ಬ್ರೇಕಿಂಗ್ ನ್ಯೂಸ್ ಇನ್ನೊಂದು ಹೆಸರೇ
*💝ಮಧುಸೂಧನ್ ಸುಶ್ಮಿತಾ ಶೌರ್ಯ* 💝
ಕುಟುಂಬ ..,
ಮೋದಿಕೇರ್ ಅತ್ಯುನ್ನತ ಸ್ಥಾನ
ಕರುನಾಡ ಹತ್ತನೇ ..,
ಕರಾವಳಿಯ ಮೊದಲ ..,
ಅತಿ ವೇಗದ ...,
ಈ ತಿಂಗಳ ದೇಶದಲ್ಲೇ ಒಂದೇ ಒಂದು ಪಟ್ಟ
*❤💎ಗ್ಲೋಬಲ್ ಬ್ಲಾಕ್ ಡೈಮಂಡ್* ❤💎
ಅಲಂಕರಿಸಿದ ನಮ್ಮ ಹೆಮ್ಮೆಯ ದಂಪತಿಗೆ ಹೃದಯ ತುಂಬಿದ ಹಾರೈಕೆಯ ಶುಭಾಶಯ ..,
ಒಹ್ ಮೈ ಗಾಡ್ ಮೈ ಜುಮ್ಮೆನ್ನಿಸುವ ಈ ಸಾಧನೆಗೆ
ಇಡೀ ದೇಶವೇ ತಿರುಗಿ ನೋಡುತ್ತಿದೆ ..,
ನಿಮ್ಮ ಈ ಸಾಧನೆಗೆ ಕರಾವಳಿಯ ಮೊದಲ ಜಾಗತಿಕ ನಾಯಕ ಅನ್ನೋ ಶಾಶ್ವತ ಬಿರುದಿಗೆ ಭಾಜನರಾದ ನಿಮಗೆ ಮತ್ತೊಮ್ಮೆ ನಮ್ಮ ಅಭಿನಂದನೆಗಳು ...,
Wednesday, February 27, 2019
ಕಾಣೆಯಾಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಗಳು ಸೆರೆ ಹಿಡಿದು ಚಿತ್ರಹಿಂಸೆ ನಿಡುತ್ತಿರೋ ಪಾಕಿ ಶಂಡರು
ಅಭಿನಂದನ ವರ್ಧಮಾನ್ ಅವರ ಒಂದು ಕೂದಲನ್ನು ಅಲುಗಾಡಿಸಲು ಪಾಕಿಸ್ತಾನದಿಂದ ಸಾಧ್ಯವಿಲ್ಲ. Geneva Convention ಅನ್ನು ಪಾಕಿಸ್ತಾನ ಸಹ ಸಹಿ ಮಾಡಿದೆ. ಇದರ ನಿಯಮಗಳ ಪ್ರಕಾರ, ಅದು ಅಭಿನಂದನ ಅವರನ್ನು ಚೆನ್ನಾಗಿ ನೋಡಿಕೊಳ್ಳಲೇಬೇಕು 😠😠😠😠😠😠
ಚಿಂತೆ ಮಾಡುವ ಅವಶ್ಯಕತೆ ಇಲ್ಲ.
ಇಡೀ ವಿಶ್ವವೇ ಪಾಕಿಸ್ತಾನವನ್ನು ನೋಡುತ್ತಿದೆ. ಅದು ಪಾಕಿಸ್ತಾನಕ್ಕು ಗೊತ್ತು.
ಯುದ್ಧ ಅಂದ ಮೇಲೆ ಇಂತಹ ಘಟನೆಗಳು ಸಹಜ !!!!!
1999 ರಲ್ಲಿ ಇದೇ ರೀತಿ ನಚಿಕೇತ ಅವರು ಸಹ ಪಾಕಿಸ್ತಾನದಲ್ಲಿ ಇದೇ ರೀತಿ ಸಿಕ್ಕು ಬಿದ್ದಿದ್ದರು. ಕೇವಲ
8 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು
😠😠😠
ಅಯ್ಯೋ ನಮ್ಮ ಪೈಲಟ್ ಸಿಕ್ಕು ಬಿದ್ದ ಎಂದು
ಹೇಡಿಗಳ ತರಹ ದುಃಖ ಪಡಬೇಡಿ 😠😠😠
ಮೂರ್ಖ ಪಾಕಿಸ್ತಾನಿಗಳ ಅಭಿನಂದನ ಅವರನ್ನು ಹೊಡೆದರೆ ಅದು ಅಂತರರಾಷ್ಟ್ರೀಯ ಯುದ್ಧ ನಿಯಮಗಳ ಉಲ್ಲಂಘನೆ ಮಾಡಿದಂತೆ....
ಅವರ ಜೀವಕ್ಕೆ ಪಾಕಿಸ್ತಾನದಿಂದ ಏನು ಮಾಡಲು ಸಾಧ್ಯವಿಲ್ಲ .... ಸಾಧ್ಯವಿಲ್ಲ... ಸಾಧ್ಯವಿಲ್ಲ 😠😠😠😠
ಇದು ಯುದ್ಧ... ಪುಲ್ವಾಮಾ & ಇಂತಹ ನೂರಾರು ದಾಳಿಗಳಲ್ಲಿ ಮೃತರಾದ ಸೈನಿಕರ ಸೇಡು ತೀರಿಸಿಕೊಳ್ಳಲು ...ಉಗ್ರವಾದ & ಪಾಕಿಸ್ತಾನ ಎಂಬ ಸಮಸ್ಯೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಇಂತಹ ತ್ಯಾಗ, ಬಲಿದಾನಗಳ ಅವಶ್ಯಕ 😠😠😠😠
ರಕ್ತ ನಮ್ಮದಿರಲಿ, ಶತ್ರುವಿನದು ಇರಲಿ.... ರಕ್ತ
ಹರಿಸದೇ ಯಾವುದೇ ಯುದ್ಧ ಗೆಲ್ಲಲು ಸಾಧ್ಯವಿಲ್ಲ ...ರಕ್ತ ಹರಿಸದೇ ರಾಕ್ಷಸರ ನಾಶ ಸಾಧ್ಯವಿಲ್ಲ 😠😠😠😠
ಪಾಕಿಸ್ತಾನದ ನ್ಯೂಸ್ ಚಾನಲ್ ಗಳನ್ನು, ಭಾರತದಲ್ಲಿ ಇದ್ದು ಪಾಕಿಸ್ತಾನದ ಪರ ಕೆಲಸ ಮಾಡುವ ಕೆಲವು ಜಿಹಾದಿ ಜನರ ಮಾತುಗಳನ್ನು ನಂಬಬೇಡಿ 😠😠😠
ಭಾರತ ಸರ್ಕಾರದ ಅಧಿಕೃತ ಹೇಳಿಕೆಗಳನ್ನು ಮಾತ್ರ ನಂಬಿ 😠😠😠😠😠
Monday, February 25, 2019
#ಬಂಡೀಪುರ_ಇತಿಹಾಸದಲ್ಲೇ #ದೊಡ್ಡ_ಅಗ್ನಿ_ದುರಂತ... 8.5 ಸಾವಿರ ಎಕರೆ ಕಾಡು #ಸಂಪೂರ್ಣ_ನಾಶ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 8.5 ಸಾವಿರ ಎಕರೆ ಕಾಡು ನಾಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ
ಕಳೆದ ವರ್ಷಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಈ ಮಟ್ಟಿಗಿನ ಹಾನಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಗೋಪಾಲಸ್ವಾಮಿ ಬೆಟ್ಟ ವಲಯವೊಂದರಲ್ಲೇ 5 ಸಾವಿರ ಎಕರೆ ಕಾಡು ಸುಟ್ಟು ಬೂದಿಯಾಗಿದೆ.
ಗೋಪಾಲಸ್ವಾಮಿ ಬೆಟ್ಟ ವಲಯದ ಗೋಪಾಲಸ್ವಾಮಿ ಬೆಟ್ಟ, ತಪ್ಪಲಿನ ಪ್ರದೇಶ ಸಂಪೂರ್ಣ ಭಸ್ಮವಾಗಿದೆ. ಬಂಡೀಪುರ ವಲಯ, ಮದ್ದೂರು ವಲಯ ಹಾಗೂ ಕುಂದಕೆರೆ ವಲಯದಲ್ಲಿ ಸಾವಿರಾರು ಎಕರೆ ಅರಣ್ಯ ಸಂಪತ್ತು, ವಿವಿಧ ಜಾತಿಯ ಮರಗಳು, ಕೆಲವು ಪಕ್ಷಿಗಳು ಸುಟ್ಟು ಕರಕಲಾಗಿವೆ.
ಸತತ ಮೂರ್ನಾಲ್ಕು ದಿನಗಳಿಂದ ಬೆಂಕಿ ಉರಿದಿದ್ದರಿಂದ ಕಾಡು ಕೆಂಡ ಹಾಸಿದಂತಾಗಿದ್ದು ಗಾಳಿ ಬೀಸಿದರೆ ಬೆಂಕಿ ಜ್ವಾಲೆಯಾಗಿ ಹಬ್ಬುತ್ತಿದೆ.
9 ಕಿ.ಮೀ..ಉದ್ದಕ್ಕೆ 25 ಅಡಿ ಎತ್ತರಕ್ಕೆ ಹಬ್ಬಿರುವ ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಕಾಡಿನ ಗೆಲ್ಲು, ಸೊಪ್ಪನ್ನು ಹಿಡಿದು ಹೊರಟಿದ್ದಾರೆ ಎಂದರೆ .....???
ಇಂತಹ ಕಾಡ್ಗಿಚ್ಚು ನಂದಿಸಲು ಒಂದೇ ಪರಿಹಾರ ಅಂದರೆ ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸುವ ಕ್ರಮ. ಸಚಿವರು ಬಂಡೀ ಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಬರುತ್ತಾರೆ ಆದರೆ ನಮ್ಮ ದರಿದ್ರ ಸರಕಾರಕ್ಕೆ ಅಡವಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಇಲ್ಲ. ಇಂತಹ ವನ್ಯ ಜೀವಿಗಳು ಇನ್ನೆಷ್ಟು ಸುಟ್ಟು ಭಸ್ಮವಾಗಿ ಹೋಗಬೇಕು. ಇನ್ನಾದರೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಅಂದರೆ ಎಂತಹ ದುಷ್ಠ, ನೀಚ ಸರಕಾರ, ಎಂತಹ ದರಿದ್ರ ರಾಜಕಾರಣಿಗಳು...!!? ಈಗ ನಾವು ಮಾಡಬೇಕಾದ ಕೆಲಸ ಏನೆಂದರೆ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( Chief Conservator of Forest ) ಇವರಿಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ವಯ್ಯಕ್ತಿಕ ವಾಗಿಯೋ ಅಥವಾ ತಮ್ಮ ಸಂಘಟನೆಯ ಮೂಲಕವೋ ಒಂದು ಮನವಿ ಬರೆಯಿರಿ...ಪಶ್ಚಿಮ ಘಟ್ಟದ ಕಾಡ್ಗಿಚ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ,
ಇದಕ್ಕೆ ಪರಿಹಾರವಾಗಿ ರಾಜ್ಯ ಸರಕಾರ ಅರಣ್ಯ ವ್ಯಾಪ್ತಿಯಲ್ಲಿ ತತ್ಕ್ಷಣ ವೆ ಕ್ರಮ ಕೈಗೊಳ್ಳುವಂತೆ ಹೆಲಿಕಾಪ್ಟರ್ ಬಳಕೆಯನ್ನು ಕಡ್ಡಾಯ ವಾಗಿ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಕಾಡ್ಗಿಚ್ಚು ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರವನ್ನು ಬರೆಯಿರಿ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಧನಾತ್ಮಕ ವಾಗಿ ಯೋಚಿಸಿ, ಇನ್ನು ಮುಂದಕ್ಕೆ ಆಗಲಿರುವ ಅಗ್ನಿ ದುರಂತವನ್ನು ತಡೆಯಲು ಪ್ರಯತ್ನಿಸೋಣ.
Subscribe to:
Comments (Atom)
