Monday, February 25, 2019

#ಬಂಡೀಪುರ_ಇತಿಹಾಸದಲ್ಲೇ #ದೊಡ್ಡ_ಅಗ್ನಿ_ದುರಂತ... 8.5 ಸಾವಿರ ಎಕರೆ ಕಾಡು #ಸಂಪೂರ್ಣ_ನಾಶ


ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 8.5 ಸಾವಿರ ಎಕರೆ ಕಾಡು ನಾಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ ಕಳೆದ ವರ್ಷಗಳಲ್ಲಿ‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಈ ಮಟ್ಟಿಗಿನ ಹಾನಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಗೋಪಾಲಸ್ವಾಮಿ ಬೆಟ್ಟ ವಲಯವೊಂದರಲ್ಲೇ 5 ಸಾವಿರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಗೋಪಾಲಸ್ವಾಮಿ ಬೆಟ್ಟ ವಲಯದ ಗೋಪಾಲಸ್ವಾಮಿ ಬೆಟ್ಟ, ತಪ್ಪಲಿನ ಪ್ರದೇಶ ಸಂಪೂರ್ಣ ಭಸ್ಮವಾಗಿದೆ. ಬಂಡೀಪುರ ವಲಯ, ಮದ್ದೂರು ವಲಯ ಹಾಗೂ ಕುಂದಕೆರೆ ವಲಯದಲ್ಲಿ ಸಾವಿರಾರು ಎಕರೆ ಅರಣ್ಯ ಸಂಪತ್ತು, ವಿವಿಧ ಜಾತಿಯ ಮರಗಳು, ಕೆಲವು ಪಕ್ಷಿಗಳು ಸುಟ್ಟು ಕರಕಲಾಗಿವೆ. ಸತತ ಮೂರ್ನಾಲ್ಕು ದಿನಗಳಿಂದ ಬೆಂಕಿ ಉರಿದಿದ್ದರಿಂದ ಕಾಡು ಕೆಂಡ ಹಾಸಿದಂತಾಗಿದ್ದು ಗಾಳಿ ಬೀಸಿದರೆ ಬೆಂಕಿ ಜ್ವಾಲೆಯಾಗಿ ಹಬ್ಬುತ್ತಿದೆ. 9 ಕಿ.ಮೀ..ಉದ್ದಕ್ಕೆ 25 ಅಡಿ ಎತ್ತರಕ್ಕೆ ಹಬ್ಬಿರುವ ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಕಾಡಿನ ಗೆಲ್ಲು, ಸೊಪ್ಪನ್ನು ಹಿಡಿದು ಹೊರಟಿದ್ದಾರೆ ಎಂದರೆ .....??? ಇಂತಹ ಕಾಡ್ಗಿಚ್ಚು ನಂದಿಸಲು ಒಂದೇ ಪರಿಹಾರ ಅಂದರೆ ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸುವ ಕ್ರಮ. ಸಚಿವರು ಬಂಡೀ ಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಬರುತ್ತಾರೆ ಆದರೆ ನಮ್ಮ ದರಿದ್ರ ಸರಕಾರಕ್ಕೆ ಅಡವಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಇಲ್ಲ. ಇಂತಹ ವನ್ಯ ಜೀವಿಗಳು ಇನ್ನೆಷ್ಟು ಸುಟ್ಟು ಭಸ್ಮವಾಗಿ ಹೋಗಬೇಕು. ಇನ್ನಾದರೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಅಂದರೆ ಎಂತಹ ದುಷ್ಠ, ನೀಚ ಸರಕಾರ, ಎಂತಹ ದರಿದ್ರ ರಾಜಕಾರಣಿಗಳು...!!? ಈಗ ನಾವು ಮಾಡಬೇಕಾದ ಕೆಲಸ ಏನೆಂದರೆ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( Chief Conservator of Forest ) ಇವರಿಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ವಯ್ಯಕ್ತಿಕ ವಾಗಿಯೋ ಅಥವಾ ತಮ್ಮ ಸಂಘಟನೆಯ ಮೂಲಕವೋ ಒಂದು ಮನವಿ ಬರೆಯಿರಿ...ಪಶ್ಚಿಮ ಘಟ್ಟದ ಕಾಡ್ಗಿಚ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಇದಕ್ಕೆ ಪರಿಹಾರವಾಗಿ ರಾಜ್ಯ ಸರಕಾರ ಅರಣ್ಯ ವ್ಯಾಪ್ತಿಯಲ್ಲಿ ತತ್ಕ್ಷಣ ವೆ ಕ್ರಮ ಕೈಗೊಳ್ಳುವಂತೆ ಹೆಲಿಕಾಪ್ಟರ್ ಬಳಕೆಯನ್ನು ಕಡ್ಡಾಯ ವಾಗಿ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಕಾಡ್ಗಿಚ್ಚು ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರವನ್ನು ಬರೆಯಿರಿ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಧನಾತ್ಮಕ ವಾಗಿ ಯೋಚಿಸಿ, ಇನ್ನು ಮುಂದಕ್ಕೆ ಆಗಲಿರುವ ಅಗ್ನಿ ದುರಂತವನ್ನು ತಡೆಯಲು ಪ್ರಯತ್ನಿಸೋಣ.

No comments:

Post a Comment